ಸೋಲು ಗೆಲುವು ಸಹಜ ಬಾಳು
ನೋವು ನಲಿವು ಅದರ ಬಿಂಬ
ಮಾವು ಬೇವು ಸಮನೆ ಮೇಳೆ
ತಾನೆ ಸವಿಯ ನಿಜದ ಸ್ವಾದ
ಬದುಕು ಬರೀ ಹೂವ ಹಾಸಿಗೆಯೆ?
ಹಲವು ಮುಳ್ಳ ಕಠಿಣ ಹಾದಿ
ಭರವಸೆಗಳೇ ನಾಳಿನಾಸರೆ
ಸಾವಿರ ಸಿರಿಗನಸುಗಳಿಗೆ ನಾಂದಿ
ಶಿಶಿರದಲಿ ಎಲೆಯುದುರಿಸಿಯೂ ಗಿಡ
ಚಿಗುರದೇ ಮತ್ತೆ ವಸಂತದಲಿ?
ಸಾವಿರದಲೆಗಳ ಎದುರಿಸಿಯೂ ದಡ
ನಿಲ್ಲದೇ ನಿಶ್ಚಲ ಛಲದಲ್ಲಿ?
ನಿನ್ನೆಗಳಾ ಕಹಿ ಇಂದಿಗೇ ಮರೆತು
ಬೆಳಕ ದಾರಿಯನು ಹುಡುಕಬೇಕು
ಕಹಿನೆನಪಿಗೆ ಸಿಹಿಲೇಪವ ಬೆರೆಸಿ
ಕತ್ತಲೆಯ ಮೀರಲಿ ಬದುಕು
8 comments:
ಮಧು...
ಚೆಂದ ಕವನ, ಇಷ್ಟ ಆತು, ಬರೀತಿರು.
ಭಲೆ, ಮಧು! ಬಾಳಿಗೆ ಭರವಸೆ ನೀಡುವ ಚೇತೋಹಾರಿ ಕವನವನ್ನು ಸರಳವಾದ ಸಾಲುಗಳಲ್ಲಿ ಮೂಡಿಸಿದ್ದೀರಿ. ತುಂಬ ಇಷ್ಟವಾಯ್ತು.
Madhu,
Simple and sweet poem :)
Nice one.. :-)
ಚೆ೦ದದ ಸಾಲುಗಳು..
keep writing..
ಶಾಂತಲಕ್ಕ, ಕಾಕಾ, ತೇಜಕ್ಕಾ, ದಿವ್ಯಾ,ಮನಮುಕ್ತಾ,
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು
nice...
nanna blogigomme banni
nice lines....
Post a Comment