Thursday, February 28, 2008

ಅವಳು ಹೇಳಿದ್ದು..


ಕಣ್ದಾವರೆ ಕುಡಿನೋಟ, ಪಿಸು ಮಾತ ತುಂಟಾಟ
ಮುಂಗುರುಳ ಮೃದುಲಾಸ್ಯ,ತುಟಿಯಂಚು ಮಂದಹಾಸ
ಗಾಢಾಂಧಕಾರ ಸೀಳಿದ ಬೆಳ್ಳಿಕೋಲ ಹೊಳಹು
ಸಾರಿವೆಯಾ ನನಸಾಗುವ ಕನಸ ಸಂಭ್ರಮವನ್ನು?

ಹೆಪ್ಪುಗಟ್ಟಿದ ಮಾತು, ಮಡುಗಟ್ಟಿದ ಮೌನ
ಕಾಲದ ಬಿಂಬ ಕಣ್ರೆಪ್ಪೆಯಲೇ ಪ್ರತಿಮೆ
ಭಾವದೊರತೆ ಮೊಗದಿ ಉಕ್ಕಿದಾ ಸಾಗರ
ಹುಸಿಯೇ ನಲ್ಲನ ಬರುವಿಕೆಯ ನಿರೀಕ್ಷೆ?

ಮೈತಬ್ಬಿದಾ ವೇಲು,ಇಳಿಬಿದ್ದ ಹೆರಳು
ಹಿನ್ನೆಲೆಯ ಅವ್ಯಕ್ತಭಾವ, ಮರೆಮಾಚಿದ ಸತ್ಯ
ಕಾಲನಾಳದಿ ಸಮಾಧಿಯಾದ ಚಿದಂಬರ ರಹಸ್ಯ
ಅರಿಯದ ನಿರಾಭರಣ ನೀರೆಯ ತುಮುಲಾಟದ ಕಥೆ, ವ್ಯಥೆ

(ನನ್ನ ಪ್ರಥಮ ಪ್ರಯತ್ನ. ಅಲ್ಲಲ್ಲಿ ತಿದ್ದಿ,ಸೂಚನೆ ನೀಡಿದ ಅಕ್ಕನಿಗೆ ಧನ್ಯವಾದಗಳು)

5 comments:

ಶಾಂತಲಾ ಭಂಡಿ (ಸನ್ನಿಧಿ) said...

ಮಧು...
"ಅವಳು ಹೇಳಿದ್ದು" ಚೆನ್ನಾಗಿದೆ ಕಣೋ...
ಇಷ್ಟೇನಾ ಅವಳು ಹೇಳಿದ್ದು? ಇನ್ನೇನನ್ನೂ ಹೇಳ್ಲಿಲ್ವಾ? :)
ಅವಳ ಮಡುಗಟ್ಟಿದ ಮೌನದೊಳಗಿಷ್ಟು ಇಳಿದು ನೋಡಬೇಕಿತ್ತು...ಏನಿತ್ತು ಅಂತ ಕಾಣಿಸ್ತಿತ್ತೇನೋ...
ಆದರೂ ಪಾಪ ಅವಳು.

ತೇಜಸ್ವಿನಿ ಹೆಗಡೆ said...

ಮಧು

ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಗಿರುವಿ. ತುಂಬಾ ಸುಂದರ ಕವನ. ಅವಳು ಹೆಳುತ್ತಲೇ ಇರಲಿ ಎಂದು ಹಾರೈಸುವೆ ;-)

Unknown said...

ಶಾಂತಲಕ್ಕಾ,
ಅವಳ ಕಣ್ಣೊಳಗೇ ಇಳಿದು ನೋಡಿದೆ. ಇನ್ನೇನೂ ಹೇಳಲಿಲ್ಲ ಅವು. ಹೇಳಿದ್ದರೆ ಬರೀತಿದ್ದೆನೇನೋ.
ನಿಮಗೂ ಪಾಪ ಅನ್ನಿಸ್ತಾ ? ಛೇ ! ಹೋಗ್ಲಿ ಬಿಡಿ.
ಪ್ರತಿಕ್ರಿಯೆಗೆ ತುಂಬಾ ಥಾಂಕ್ಸ್.

ತೇಜಕ್ಕಾ,
ಥಾಂಕ್ಸ್ !. ಅವಳು ಹೇಳ್ತಾನೆ ಇದ್ರೆ ನಾನು ಬರೀತಾನೆ ಇರಬಹುದು ಅಲ್ವಾ ? :-)

sunaath said...

ಕವಿತೆ ಮತ್ತು ಚಿತ್ರ ಚೆನ್ನಾಗಿವೆ, ಮಧು. ಪ್ರಥಮ ಪ್ರಯತ್ನ ಅಂತ ಹೇಳ್ತೀರಾ. ಹಾಗಿದ್ದರೆ, ನೀವು ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿದ್ದೀರಿ.

Unknown said...

ಸುನಾಥರವರೇ,
ಪ್ರೋತ್ಸಾಹಕ್ಕೆ ಧನ್ಯವಾದಗಳು. ಬರ್ತಾ ಇರಿ.