Friday, March 18, 2011

ಹೊಸ ಚಿಗುರು

ಪುಟ್ಟ ಪಾದ ದಿಟ್ಟ ನೋಟ
ತೊದಲ ನುಡಿವ ಹಕ್ಕಿ ಕಂಠ
ಮುಗ್ಧ ನಯನ, ಸ್ನಿಗ್ಧ ನಗು
ಬೆರಗು ಬಿನ್ನಾಣಕೊಂದು ಹೆಸರು

ತುಟಿಯ ಬಿರಿಯೆ ತುಂಟ ಹಾಸ
ಹರಿಸಿ ಸುತ್ತ ಖುಶಿಯ ಹೊಳೆಯ
ಇಳಿಸಿ ಇಳೆಗೆ ಸ್ವರ್ಗ ಲೋಕ
ಮರೆಸಿ ಸಕಲ ದುಃಖ ದುಗುಡ

ನಲಿವು ನಗೆಯ ಹೊನಲು ನಿತ್ಯ
ಯಾಕೆ ಬೇಕು ಜಗದ ಮಿಥ್ಯ?
ಮೈಯ ಮುರಿವ ಸೊಬಗೇ ನೃತ್ಯ
ಉರಿವ ಸೂರ್ಯನಷ್ಟೆ ಸತ್ಯ

ಹೊಸದು ಆಸೆ ಹೊಸದು ಕನಸು
ಮಮತೆಯೊಡಲ ಬೆಳಗಿ ಜೀವ
ಹರುಷ ಭಾವ ತುಂಬಿ ಎದೆಯ
ಎನಿತು ಧನ್ಯ ಬಾಳ ಪಯಣ

5 comments:

sunaath said...

ಮಧು,
ನೀವು ಪಡೆದಿರುವ ಈ ನಲಿವು ನಿಮ್ಮನ್ನು ಸದಾ ಸುಖಿಯಾಗಿಡಲಿ. ಕವನವು ನಿಮ್ಮ ಹರುಷವನ್ನು ಬಿಂಬಿಸುತ್ತದೆ.

ಶಾಂತಲಾ ಭಂಡಿ (ಸನ್ನಿಧಿ) said...

ಮಧು...
‘ಹೊಸ ಚಿಗುರು’ ತುಂಬ ಇಷ್ಟವಾಯ್ತು.
ಹೀಗೆ ಹೊಸ ಖುಶಿಯ ಹೊಸ ಕ್ಷಣಗಳ ತರಲಿ ‘ಸಂಪದ’

ಪ್ರೀತಿಯಿಂದ,
-ಶಾಂತಲಾ ಭಂಡಿ

Divya A L said...

t40ba chennag5de padya!!

ತೇಜಸ್ವಿನಿ ಹೆಗಡೆ said...

ಮಧುವನದಲ್ಲೊಂದು ಸುಂದರ ಚಿಗುರು ಹುಟ್ಟಿದೆ...:)ಬಾಳಲ್ಲಿ ಸಿರಿ ಸಂಪದದ ಘಮ ಘಮ ಈಗಾಗಲೇ ಬಂದಾಗಿದೆ.. :) ಪುಟ್ಟದಾದರೂ ಮುದ್ದಾದ ಕವನ.. "ಸಂಪದಳ" ಸ್ನಿಗ್ಧ ನಗುವಿನಂತಿದೆ.

Unknown said...

ಕಾಕಾ,
ನಿಮ್ಮ ಯಾವತ್ತಿನ ಪ್ರೀತಿಗೆ, ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು.
ಶಾಂತಲಕ್ಕಾ,
ನಿಮ್ಮ ಪ್ರೀತಿ, ಅಭಿಮಾನಕ್ಕೆ ಥ್ಯಾಂಕ್ಸ್
ದಿವ್ಯಾ,
ಥ್ಯಾಂಕ್ಸ್ ಕಣೇ.
ತೇಜಕ್ಕಾ,
ನಿಜ ನೀವು ಹೇಳಿದ್ದು. ಅವಳು ಹೀಗೆ ಖುಷಿಯನ್ನು ಹರಡುತ್ತಾ ಇರಲಿ ಎಂಬುದೇ ನಮ್ಮ ಆಶಯ. ಥ್ಯಾಂಕ್ಸ್.