ಬೆರಳ ತುದಿಯಲಿ ಸರಿದ ವರುಷಗಳ
ಸುರಿವ ಮಳೆಯಲಿ ಕುಣಿದ ಹರುಷವ
ಮರೆವ ನೆಪದಲಿ ಕಳೆದ ನೆನಪುಗಳ
ಮರಳಿ ತರಲಿ ಶುಭದಿನದ ಘಳಿಗೆ
ಮತ್ತೆಬಂದ ನವವಸಂತ ತರಲಿ
ನಿತ್ಯ ನವಿರ ಒಲವ ಹೊಳಹು
ಸುತ್ತಮುತ್ತ ಕವಿದಕಪ್ಪ ಭೇದಿಸಿ
ಕತ್ತಲಿನ ದೀಪದಂತಿರಲಿ ಬಾಳು
ಹತ್ತುಹಲವು ನೋವುನಲಿವ
ಮೆತ್ತಗಾಗಿಸುವ ಸೋಲುಗೆಲುವ
ಬಾಳಪಥದಿ ನಗುತ ನಡೆದು
ನಾಳೆಗನಸುಗಳ ಭರವಸೆಯಾಗು
12 comments:
ಮಧು,
ಕವನ ಚೆನ್ನಾಗಿದೆ....ನವವಸಂತಕ್ಕೆ ಸ್ವಾಗತ ಚೆನ್ನಾಗಿದೆ..
ಮಧು ,
ಜೊತೆಯಾದವಳಿಗೊಂದು ಸುಂದರ ಉಡುಗೊರೆ ನಿನ್ನ ಕವನ.
ಸೋಲು-ಗೆಲುವು , ಕಷ್ಟ -ಸುಖ, ನೋವು-ನಲಿವುಗಳೆಲ್ಲವನ್ನೂ ಜೊತೆಯಾಗಿ ಹಂಚಿಕೊಂಡು ಸದಾ ಸುಖವಾಗಿರಿ ಎಂಬುದು ಈ ಅಕ್ಕನ ಹಾರೈಕೆ .
"ಬಾಳಪಥದಿ ನಗುತ ನಡೆದು
ನಾಳೆಗನಸುಗಳ ಭರವಸೆಯಾಗು"
ಪರಸ್ಪರರಿಗೆ ಭರವಸೆಯಾಗಿ, ಆಸರೆಯಾಗಿ ನಗುತ ನಡೆದು ಬಾಳಿರಿ. ಸುಖವಾಗಿರಿ.
ಮಧುವಿನರ್ಚನಾಳಿಗೆ,
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಪ್ರೇಮಾರ್ಚನೆಯಲ್ಲಿ ಸದಾ ಬೆಳಕಾಗಿ ನೂರುಕಾಲ ಬಾಳಲೆಂದು ಮನಃಪೂರ್ವಕವಾಗಿ ಹಾರೈಸುವೆ ನಿನ್ನೊಲವಿನ ಸಂಗಾತಿಗೆ..:) ಅವಳ ನಗುವಿನ ಬೆಳಕು ನಿನ್ನ ಮನೆ ಮನವನ್ನು ಬೆಳಗುತಿರಲಿ.
ಚೆನ್ನಾಗಿದೆ ಕವನ.. ಅರ್ಚನಳಷ್ಟೇ ಸರಳ ಹಾಗೂ ಸುಂದರ :)
ಶಿವು,
ಧನ್ಯವಾದಗಳು
ಚಿತ್ರಕ್ಕಾ,ಜ್ಯೋತಿ ಅಕ್ಕಾ
ನಿಮ್ಮ ಹಾರೈಕೆಗೆ ಧನ್ಯವಾದಗಳು. ನಿಮ್ಮ ಪ್ರೀತಿಪೂರ್ವಕ ಆಶೀರ್ವಾದಗಳು ನಮ್ಮ ಮೇಲೆ ಸದಾ ಇರಲಿ.
ತೇಜಕ್ಕಾ,
ನಿಮ್ಮ ಸುಂದರವಾದ ಹಾರೈಕೆಗೆ ಪ್ರೀತಿಪೂರ್ವಕ ಧನ್ಯವಾದಗಳು. ನಿಮ್ಮ ಸ್ನೇಹ ನಿರಂತರವಾಗಿ ನಮ್ಮ ಜೊತೆಯಿರಲಿ
ಮಧು,
ತುಂಬಾ ಸೊಗಗಾಗಿ ಮೂಡಿ ಬಂದಿದೆ ಈ ಕವನ.
ಬಿಡುವು ಮಾಡಿಕೊಂಡು ನನ್ನ ಅಂತರ್ವಾಣಿ ಕೇಳಲು ಬನ್ನಿ
ಮಧು,
ನಿಮ್ಮ ಬಾಳದಾರಿ ಹೂವು ಚೆಲ್ಲಿದ ಹಾದಿಯಾಗಲಿ.
Hey good one!!!
:) ಚನಾಗ್ ಬರದ್ದೆ.
ಮಧು...
ನಾನೂ ಮದುವೆಯಾದ ಹೊಸದರಲ್ಲಿ..
ನನ್ನಾಕೆಗೆ ಇದೇ ರೀತಿ ಕವನ ಬರೆದಿದ್ದೆ..
ಕಷ್ಟಗಳೆಷ್ಟೇ ಬರಲಿ..
ಮನದನ್ನೆ ಜೊತೆಯಿರಲು..
ನಗುನಗುತ ಎದುರಿಸ ಬಹುದು..
ತುಂಬ ಭಾವ ಪೂರ್ಣವಾಗಿದೆ..
ಅಭಿನಂದನೆಗಳು..
ಜಯಶಂಕರ್
ತುಂಬಾ ಧನ್ಯವಾದಗಳು. ನಿಮ್ಮಲ್ಲಿಗೆ ಆಗಾಗ ಬರ್ತಾನೇ ಇರ್ತಿನಿ.
ಸುನಾಥ್ ಕಾಕಾ
ತುಂಬಾ ಧನ್ಯವಾದಗಳು
ದಿವ್ಯಾ,
ಥ್ಯಾಂಕ್ಸ್ :-)
ಶ್ರ್ಇನಿಧಿ,
ಥ್ಯಾಂಕ್ಸ್ ಅಣ್ಣಾ. ನೀವು ಕಾಮೆಂಟ್ ಹಾಕಿದ್ದು ಬಹಳ ಖುಶಿ ಆತು. ಬರ್ತಾ ಇರಿ.
ಪ್ರಕಾಶಣ್ಣಾ,
ತುಂಬಾ ಥ್ಯಾಂಕ್ಸ್, ನಿಮ್ಮ ಹಾರೈಕೆಗೆ.
ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.
ಶುಭವಾಗಲಿ,
- ಶಮ, ನಂದಿಬೆಟ್ಟ
Post a Comment