Thursday, March 20, 2008

ಯಾವ ಮೋಹನ ಮುರಳಿ ಕರೆಯಿತೋ

ಕೆಲವೊಮ್ಮೆ ನನಗೆ ಹಾಗಾಗುತ್ತೆ. ಯಾವುದೋ ಹಾಡು ತುಂಬಾ ಹಿಡಿಸಿ, ಬಹಳಷ್ಟು ದಿನಗಳ ಕಾಲ ಕಾಡುತ್ತಾ ಇರತ್ತೆ. ಇಡೀ ದಿನ ಅದರದ್ದೇ ಗುಂಗು. ಈಗೊಂದು ೧೫ ದಿನಗಳಿಂದ ಈ ಹಾಡು ಕಾಡುತ್ತಾ ಇದೆ.

ಇದು ತೆಲುಗಿನ "ಸಿರಿವೆನ್ನೆಲ" ಚಿತ್ರದ್ದು. ಈ ಹಾಡಿನ ಸಂಪೂರ್ಣ ಸಾಹಿತ್ಯ ಓಂಕಾರದ ಮೇಲೆ ರಚಿತವಾಗಿದೆ. ನನ್ನ ತೆಲುಗು ರೂಂಮೇಟನ್ನು ಕಾಡಿ ಬೇಡಿ, ಸಾಹಿತ್ಯದ ಅರ್ಥ ತಿಳಿದುಕೊಂಡೆ. ಓಂಕಾರವನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದಾನೆ ಸಾಹಿತಿ!. "ಸರಸ ಸ್ವರ ಸುರ ಝರೀ ಗಮನಂ ಸಾಮವೇದ ಸಾರಮಿದಿ" ಎಂಬಂತ ಸುಂದರ ಸಾಲುಗಳನ್ನು ಪೋಣಿಸಿ ರಚಿಸಿದ್ದಾರೆ ಸಾಹಿತಿ ಶ್ರೀ ಸೀತಾರಾಮ ಶಾಸ್ತ್ರಿ ಅವರು. ಅದಕ್ಕೆ ಒಳ್ಳೆಯ ಸಂಗೀತ ಬೇರೆ.ಈ ಹಾಡಿನಲ್ಲಿ ಕೊಳಲಿನ ಬಳಕೆ, ಹಾಡಿನ ಸೌಂದರ್ಯಕ್ಕೆ ಮೆರಗು ತಂದಿದೆ ಅಂದು ನನಗೆ ಅನ್ನಿಸುತ್ತೆ. ಈ ಹಾಡಿಗೆ ಪ್ರಸಿದ್ಧ ಕಲಾವಿದ ಹರಿಪ್ರಸಾದ್ ಚೌರಾಸಿಯಾ ಅವರು ಕೊಳಲಿನ ಹಿನ್ನೆಲೆ ಒದಗಿಸಿದ್ದಾರೆ. ಸಂಗೀತ ನಿರ್ದೇಶನ ಕೆ.ವಿ.ಮಹಾದೇವನ್, ಹಾಡಿದವರು ಎಸ್.ಪಿ.ಬಿ ಮತ್ತು ಪಿ.ಸುಶೀಲಾ. ಹ್ಮಾ.. ಮರೆತಿದ್ದೆ. ಈ ಚಿತ್ರದಲ್ಲಿ ನಾಯಕ ಕುರುಡ, ಆದರೆ ಚೆನ್ನಾಗಿ ಕೊಳಲು ಬಾರಿಸುತ್ತಾನೆ. ನಾಯಕಿ ಮೂಕಿ. ಮೂಕಿಯ ಪಾತ್ರದಲ್ಲಿ ಸುಹಾಸಿನಿಯವರು ಮನೋಹಕ ಅಭಿನಯ ನೀಡಿದ್ದಾರೆ.

ಒಳ್ಳೆಯ ಸಾಹಿತ್ಯ, ಸಂಗೀತ, ಹಿನ್ನೆಲೆ ಗಾಯನ, ಹಿನ್ನೆಲೆಯಲ್ಲಿ ತೇಲಿ ಬರುತ್ತಿರುವ ಕೊಳಲಿನ ಸದ್ದು, ಇವೆಲ್ಲಾ ಒಟ್ಟಿಗೆ ಸೇರಿದರೆ ಗಂಧರ್ವಲೋಕ ಸೃಷ್ಟಿಯಾಗದೇ ಇನ್ನೇನಾದೀತು?

5 comments:

ಸುಧೇಶ್ ಶೆಟ್ಟಿ said...

ಯಾವ ಮೋಹನ ಮುರಳಿ ಕರೆಯಿತೋ…. ಅದನ್ನು ನನ್ನ ಕಾಲರ್ ಟ್ಯೂನಾಗಿ ಹಾಕಿಕೊ೦ಡಿದ್ದೇನೆ. ಅದನ್ನು ಕೇಳಿದವರೆಲ್ಲ “ಎಷ್ಟು ಚೆನ್ನಾಗಿದೆ” ಎ೦ದಿದ್ದಾರೆ. ಕನ್ನಡ ಬರದವರು, ನನ್ನ ಬಳಿ ಅದರ ಅರ್ಥ ಕೇಳಿ ತಿಳಿದುಕೊ೦ಡಿದ್ದಾರೆ. ನೀವು ಹೇಳಿದ ಹಾಗೆ, ಸ೦ಗೀತಕ್ಕೆ ಭಾಷೆಯ ಹ೦ಗಿಲ್ಲ. ರಸಾಸ್ವಾದನೆ ಮಾಡುವ ಮನಸಿದ್ದರೆ ಸಾಕು.

Mahalingesh said...

Madhu,
that is really very ncie song, my friend sings so well... real smoothing..

I am getting very regular on blogs now so on Madhuvan

keep rocking maga

ನಾವಡ said...

ಮಧು,
ಖುಷಿಯಾಯಿತು. ಸಿರಿವೆನ್ನಲ ಚಿತ್ರದ ಹೆಸರು ಕೇಳಿದ್ದೆ. ಆದರೆ ಚಿತ್ರ ನೋಡಿರಲಿಲ್ಲ. ನಿಮ್ಮಲ್ಲಿ ಹಾಕಿದ ಲಿಂಕ್ ನಲ್ಲಿ ಗೀತೆ ಕೇಳಿದ ಮೇಲೆ ಚಿತ್ರ ನೋಡಬೇಕೆನಿಸಿದೆ. ಉತ್ತಮ ಹಾಡು ದೊರಕಿಸಿಕೊಟ್ಟಿದ್ದಕ್ಕೆ ಥ್ಯಾಂಕ್ಸ್. ಅಂದಹಾಗೆ ಸಾಮಜವರಗಮನಾ ನನಗೂ ಇಷ್ಟವಾದ ಹಾಡು.
ನಾವಡ

Unknown said...

ಸುಧೇಶ್,
ನೀವು ಹೇಳುವುದು ಅಕ್ಷರಶ ನಿಜ.
ದಡ್ಡಿ,
ತಾಂಕ್ಸ್, ಬರ್ತಾ ಇರು
ನಾವುಡರೇ,
ಧನ್ಯವಾದಗಳು. ಹೀಗೆ ಬರ್ತಾ ಇರಿ ಇಲ್ಲಿಗೆ.

ದೀಪಸ್ಮಿತಾ said...

ಸಂಗೀತಕ್ಕೆ ಭಾಷೆಯ ಹಂಗಿಲ್ಲ. ಅದೇ ರೀತಿ ಬೇರೆ ಭಾಷೆಯವರೂ ನಮ್ಮ ಕನ್ನಡದ ಸುಮಧುರ ಹಾಡುಗಳ ಕೇಳಿ, ಬರೆದರೆ ಎಷ್ಟು ಸೊಗಸು. ನಾನೊಬ್ಬ ಹೊಸ ಬ್ಲಾಗಿಗ, ನನ್ನದು http://www.ini-dani.blogspot.com/. ದಯವಿಟ್ಟು ಓದಿ ವಿಮರ್ಶಿಸಿ.