Friday, January 16, 2009

ನಿನ್ನೆ ನಾಳೆಗಳ ನಡುವೆ

ಸರಿವ ಸಮಯದ ನೆರಳತುದಿಗೆ ಜೋತುಕೊಂಡೇ
ಮರೆವ ಮಾಯೆಯ ಮೋಹಕೆ ಮೊರೆಹೋಗಿದ್ದೇವೆ
ಹರಿವ ನದಿಯ ಜಾಡು ತಪ್ಪಿಹೋದರೂ ಹುಡುಕಿಲ್ಲ
ನಾವು,ನಮಗೆ ನಿನ್ನೆಗಳ ನೆನಪೇ ಇಲ್ಲ!

ನಡೆವ ನೆಲದಲ್ಲಿ ನೆನೆದ ನೆತ್ತರ ನೋಡಿನೋಡಿಯೂ
ಮೋಸದ ಮರೆಯಲ್ಲಿ ಮೌನಕ್ಕೆ ಮಾತಾಗಿದ್ದೀವೆ
ಸಭ್ಯತೆಯ ಸೋಗಿನ ಸೆರಗ ಸುತ್ತಿಕೊಂಡೇ ಸಾಗಿದ್ದೇವೆ
ನಾವು,ನಮಗೆ ವರ್ತಮಾನದ ತಲ್ಲಣಗಳಿಲ್ಲ!

ಕನಸ ಕಣ್ಣು ಕಸಿವ ಕೆಲಸಕೆಂದೂ ಕುಗ್ಗದೆ
ಬಸಿವ ಬೆವರ ಭಾರಕೂ ಬಸವಳಿದು ಬಿದ್ದಿಲ್ಲ
ಕಾದಿರಿಸಿದ ಕಾಮನೆಗಳ ಕತ್ತಲಲ್ಲೇ ಕಾದಿದ್ದೇವೆ
ನಾವು,ನಮಗೆ ನಾಳೆಗಳ ಹಂಗಿಲ್ಲ!

10 comments:

Greeshma said...

ಮೊನಚಾದ ವ್ಯಂಗ್ಯದೊಂದಿಗೆ ವಾಸ್ತವವನ್ನು ಕಟ್ಟಿಕೊಟ್ಟ ರೀತಿ ಇಷ್ಟವಾಯಿತು..ಚೆನ್ನಾಗಿದೆ.

shivu.k said...

ವಾಸ್ತವವನ್ನು ತುಂಬಾ ಚೆನ್ನಾಗಿ ಬರೆದಿದ್ದೀರಿ....ಪದಗಳಲ್ಲಿ ಹಿಡಿತ ಮತ್ತು ಅರ್ಥವಂತಿಕೆ ತುಂಬಿದೆ......ಒಳ್ಳೆಯ ಕವನ...ಹೀಗೆ ಬರೆಯುತ್ತಿರಿ...

ತೇಜಸ್ವಿನಿ ಹೆಗಡೆ said...

ಮಧು,

ಕವನ ಬರೆಯಲೇ ಬರದು ಎಂದು ಹೇಳುತ್ತಾ ಇಷ್ಟೊಳ್ಳೆ ಕವನವನ್ನು ಬರೆದಿರುವಿಯಲ್ಲ..! ನಿಜಕ್ಕೂ ಕವನದ ಗೂಡಾರ್ಥ ಮನಸಿಗೆ ಪಿಚ್ಚೆನಿಸುವಂತಿದೆ. ನಾವು ಒಂದು ರೀತಿ ನರಸತ್ತವರೇನೋ ಎಂದೆನಿಸಿದರೆ ಅದರಲ್ಲೇನೂ ಅತಿಶಯೋಕ್ತಿಯೂ ಇಲ್ಲ. ಪ್ರಸ್ತುತ ಕಾಲಕ್ಕೆ ಕನ್ನಡಿ ಹಿಡಿವಂತಿದೆ ಕವನ. ಪೆನ್ನಿನ ಮೊನಚಿಗಾದರೂ ಎಚ್ಚೆತ್ತುಕೊಂಡು ನಾವು ತುಸು ಕಣ್ತೆರೆದರೆ ಒಳಿತಾಗುವುದು ಎಂದಿನಿಸುತ್ತಿದೆ. ನಿನ್ನೆ ನಾಳೆಗಳ ನಡುವೆ ಇಂದು ಕಳೆಯದಿರಲೆಂದೇ ಹಾರೈಸುವೆ. ಒಂದು ಉತ್ತಮ ಕವನಕ್ಕಾಗಿ ಧನ್ಯವಾದಗಳು.

ಗಣಪತಿ ಬುಗಡಿ said...

hiii
nice one..
bahala dina aadamele blog update maadidde..

keep it up

sunaath said...

ಸುಂದರವಾದ ಕವನ,ಮಧು.
ತುಂಬಾ ಇಷ್ಟವಾಯ್ತು.

Ittigecement said...

tumbaa chandada kavana...

Unknown said...

ಗ್ರೀಷ್ಮಾ, ಶಿವು, ಸುನಾಥ್ ಕಾಕಾ, ಗಪ್ಪತಿ, ಪ್ರಕಾಶಣ್ಣ, ತೇಜಕ್ಕ ಎಲ್ಲರಿಗೂ ಧನ್ಯವಾಗಳು
ತೇಜಕ್ಕ, ನಿಮ್ಮ ಹಾರೈಕೆಗೆ ಧನ್ಯವಾದಗಳು.

shivu.k said...

ಮಧು ಸರ್,

ಮನಃಪೂರ್ವಕವಾಗಿ ನಗಬೇಕಾ.. ......!! ನಡೆದಾಡುವ ಭೂಪಟಗಳನ್ನು....ನೋಡಲು ಬನ್ನಿ...

http://chaayakannadi.blogspot.com/

ಪ್ರೀತಿಯಿರಲಿ...

ಶಿವು.....

ಸುಪ್ತದೀಪ್ತಿ suptadeepti said...

ಮಧು, ಮನ ತಟ್ಟುವ ಕವನ, ಚೆನ್ನಾಗಿಯೇ ಬರೆದಿದ್ದೀ.

ಗೌತಮ್ ಹೆಗಡೆ said...

mast kavana boss:)